Friday, January 29, 2010

ಮಿಂಚು..





                       ಮಿಂಚು

ಶಂಖಿನಿಯೋ? ದೇವತೆಯೋ? ಯಾರಿವಳು?
ಮೆಲ್ಲಮೆಲ್ಲನೆ ಹೆಜ್ಜೆಯಿಡುತಾ, ಹನಿಹನಿ ಮಳೆ ತಂದಿಹಳು,
ಸನಿಹ ಬಂದು ನಿಲ್ಲುತಾ, ನಾಕವನಕೆ ಕರೆದೊಯ್ದಿಹಳು,
ಕಣ್ಣಕಾಂತಿಯ ಕಿರಣದಿಂದ, ತಿಂಗಳನ್ನೂ ನಾಚಿಸಿಹಳು,
ಹಸನ್ಮುಖಿಯ ಹಸನತೆಯೋ!! ಮನೋಲ್ಲಾಸವ ಹೆಚ್ಚಿಸಿಹಳು,
ಅಧರಗಳ ಚಿಪ್ಪು ತೆರೆದು, ಕನ್ನಡ ನುಡಿಮುತ್ತುಗಳ ಉದುರಿಸಿಹಳು,
ಗಾಂಭೀರ್ಯತೆ-ಚಂಚಲತೆ, ಪರಿಪರಿಯಲ್ಲೂ ವಿಸ್ಮಿತಗೊಳಿಸಿಹಳು,
ಮಧುರ-ಮನೋಹರ ಈ ಶ್ರುತಿಸ್ವರ, ಮನವ ಶುದ್ಧಿಸಿಹಳು,
ನಗೆಮಿಂಚು ಬೀರುತಾ, ಕತ್ತಲೊಳ ಭಾವನೆಗಳ ಬೆಳಗಿಸಿಹಳು,
ನಯನಗಳ ನಮ್ರದಿಂದ, ಇವನನ್ನು ತನ್ನ ಅಂತರ್ಗತದಲ್ಲಿ ಅಂತರ್ಧಾನವಾಗಿಸಿಕೊಂಡಿಹಳು,
ಶಂಖಿನಿಯೋ? ದೇವತೆಯೋ? ಯಾರಿವಳು?



 

ಪದಗಳ ಅರ್ಥ:
೧.ಶಂಖಿನಿ-ಅಪ್ಸರೆ.
೨.ಸನಿಹ-ಹತ್ತಿರ.
೩.ನಾಕವನ-ಸ್ವರ್ಗದ ವನ.
೪.ಕಾಂತಿ-ತೇಜಸ್ಸು.
೫.ತಿಂಗಳು- ಚಂದ್ರನ ಬೆಳಕು.
೬.ಹಸನ್ಮುಖಿ- ನಗುಮುಖ ಉಳ್ಳವಳು.
೭.ಹಸನ-ಶುದ್ಧ.
೮.ಮನೋಲ್ಲಾಸ-ಮನದ ಸಂತೋಷ.
೯.ಅಧರ-ತುಟಿ.
೧೦.ವಿಸ್ಮಿತ-ಅಚ್ಚರಿ.
೧೧.ಮನೋಹರ-ಸುಂದರ.
೧೨.ನಯನ-ಕಣ್ಣು.
೧೩.ಅಂತರ್ಗತ-ಒಳಮನಸ್ಸು.
೧೪.ಅಂತರ್ಧಾನ-ಮಾಯ.


4 comments: