ಸರ್ವರಿಗೂ ನಮಸ್ಕಾರ,
ಏನ್ ಸಮಚಾರ? ಹೇಗಿದ್ದೀರಿ?
ನಾನು ಪರೀಕ್ಷೆಯಲ್ಲಿ ಬ್ಯುಸಿಯಾಗಿದ್ದರಿಂದ, ನನ್ನ ಈ ಅಧಿಕೃತ ಅಂತರ್ಜಾಲದ ಚಟುವಟಿಕೆಗಳನ್ನು ಮೊಟಕುಗೊಳಿಸಬೇಕಾಗಿ ಬಂತು. ಎನಿವೇಜ಼್, ನಾನು ಈಗ ಮತ್ತೆ ಪೆನ್ನು-ಪುಸ್ತಕ ಹಿಡಿದು ಮನದ ಹುಚ್ಚು ಭಾವನೆಗಳ ಮುಗ್ಧ ಅಭಿವ್ಯಕ್ತನೆಗೆ ಮುಂದಾಗಿದ್ದೇನೆ. ಸರಿ, ಲೆಟ್ಸ್ ಕಂ ಟು ದಿ ಪಾಯಿಂಟ್.
’ಅನಿಸುತಿದೆ ಯಾಕೋ ಇಂದು’ - ಈ ಹಾಡನ್ನು ಕೇಳದಿರುವ ಕನ್ನಡಿಗರೇ ಇಲ್ಲ. ಇನ್ ಫಾಕ್ಟ್, ಕನ್ನಡಿಗನೆಂದು ಕರೆಸಿಕೊಳ್ಳಬೇಕಾದಲ್ಲಿ, ಈ ಹಾಡು ಕಂಠಪಾಠವಾಗಿರಲೇಬೇಕು! ಈ ಹಾಡಿನ ವಿಶೇಷತೆಯೇನೆಂದರೆ ಸರಳವಾದರೂ ಅಮೋಘ ಸಂಗೀತ ಮತ್ತು ಅದ್ಭುತ ಸಾಹಿತ್ಯ. ಹಾಡಿನಲ್ಲಿ ನಾಯಕನು ತನ್ನ ಪ್ರೀತಿಯನ್ನು ವಿಭಿನ್ನವಾದರೂ ನೂತನವಾದ ರೀತಿಯಲ್ಲಿ ವ್ಯಕ್ತ ಪಡಿಸುತ್ತಾನೆ. ಈ ಹಾಡು ಸೂಪರ್ ಹಿಟ್ ಆದಮೇಲೆ ಅನೇಕ ಪ್ರೇಮಗೀತೆಗಳು ಬಂದು ಹೋಗಿವೆ. ಸರಿ, ನಾನೂ ಒಂದು ಕೈ ನೋಡುವ!
ಈ ಪದ್ಯದಲ್ಲಿ ಹೊಸ ’ಕಂಪ್ಯಾರಿಸನ್ಸ್’ಗಳನ್ನು ಉಪಯೋಗಿಸಲು ಯತ್ನಿಸಿದ್ದೇನೆ. ಸ್ವಲ್ಪ ’ಫಿಲಾಸಫಿ’ ಕೂಡ ಇದ್ದಿರಬಹುದು. ನೀವು ಯಾವುದೇ ’ಆಂಗಲ್’ನಲ್ಲಿ ಓದಿದರೂ ಸರಿ, ಒಟ್ಟಾರೆ ಪದ್ಯದ ನಾಯಕನ ಮನದ ಮೂರು ಮಾತುಗಳ ಅರ್ಥ ಹಾಗೂ ಆ ಮಾತುಗಳ ಹಿಂದಿರುವ ಭಾವನೆಗಳು ನಿಮ್ಮನ್ನು ಮುಟ್ಟಿದರೆ ಸಾಕು. (--ಈ ಪದ್ಯ ಕೇವಲ ಕಾಲ್ಪನಿಕ--)
ಸರಿ, ಓದಿ. ಹಾ, ಒನ್ ಮೋರ್ ರಿಕ್ವೆಸ್ಟ್.. ಅನೇಕ ಬಾರಿ ಪದ್ಯದ ಆಳವನ್ನು ಅರಿಯಲು ಬಾರಿ-ಬಾರಿ ಓದಬೇಕಾಗುತ್ತದಂತೆ. ನನಗೂ ಈ ಅನುಭವ ಆಗಿದೆ. ಈ ಪದ್ಯವನ್ನು ಕವಿಯ ಕಣ್ಣುಗಳ ಮೂಲಕ ಕಂಡರೆ, ನಿಮ್ಮಯ ಕಣ್ಣಿಂದ ಹನಿಯೊಂದು ಬಂದೇ ಬರುವುದು, ಜೋಕೆ! ಸೋ, ಸಮಯದಾರಣ್ಯದಲ್ಲಿ ಬೇಗೆ ಇಲ್ಲದಿದ್ದಲ್ಲಿ ಬೇಗ-ಬೇಗ ಓದದೇ, ಟೇಕ್ ಯುವರ್ ಟೈಂ..
ಅತಿ ಶೀಘ್ರದಲ್ಲಿ:
ಗದ್ಯಗಳು: 1. Sachin & Me.
2. The Person I want to be: ' '!
3.Translations.
ಹಾಗೂ ಮತ್ತೊಂದು ’ಟ್ರಾಜಿಕ್’ ಪದ್ಯ :(
ಬೈ ದಿ ವೇ: ’ಫೀಡ್‍ಬ್ಯಾಕ್’ ಕೊಡಲು ಮರೆಯಬೇಡಿ; ಯಾವುದಾದರೊಂದು ಆಸಕ್ತಿಕರ ವಿಷಯದ ಬಗ್ಗೆ ಚರ್ಚಿಸಲು ಇಷ್ಟವಿದ್ದಲ್ಲಿ, ಅದನ್ನು ನನ್ನ ಗಮನಕ್ಕೆ ತರಲು ಮರೆಯಬೇಡಿ. ಧನ್ಯವಾದಗಳು.
(See Below..)
(See Below..)
No comments:
Post a Comment