Sunday, November 1, 2009

ಮೇಘೋದ್ಗಾರ

(Press Ctrl+ for font increase and Ctrl- for font decrease)


ರೀಸೆಂಟ್ಲಿ, ಕರ್ನಾಟಕ ಹಾಗೂ ಪಕ್ಕದ ಆಂಧ್ರದಲ್ಲಿ ವಿಪರೀತ ಮಳೆಯಾಗಿ ಫ಼್ಲಡ್ಸ್ ಕೂಡ ಆಯಿತು. ಕೆಳಗಿನ ಸಾಲುಗಳಲ್ಲಿ ನಾನು ಮಳೆಯ ಬಗ್ಗೆ, ಒಂದು ಹೊಸ ಆಂಗಲ್ನಲ್ಲಿ ಬರೆಯಲು ಯತ್ನಿಸಿದ್ದೇನೆ. ಓದಿ ನೋಡಿ.



               ಮೇಘೋದ್ಗಾರ


ಹಸಿವಿಲ್ಲ ಕವಿಯ ತನುವಿಗೆ, ತೃಷೆಯಿಲ್ಲ-ತೃಪ್ತಿಯಿಲ್ಲ
ಮನದ ಉಪವನದಲಿ ಹೂ ಬಿಡುವ ತನಕ,
ಹೀಗೊಮ್ಮೆ ನಾನು ಮಗದೊಮ್ಮೆ ಕುಳಿತೆ ನೆನಪಿನೊಡನೆ,
ನೆನಪಿನ ಮುಗಿಲಿಂದ ಮಳೆಯಿಲ್ಲ, ಹೂ ಬಿಡದಿನ್ನು


ಆಲಸ್ಯ ಕೂಡಿದೆ ಮನದ ಮನನದಲಿ, ಮನಃಕ್ಲೇಶವಿದು,
ದಿಕ್ಕನೆ ದಿಕ್ಕರಿಯದೆ ದಿಕ್ಕಾಪಟ್ಟೆ ದಿಕ್ಕುಗೆಡಲು ನಾನು,
ದಿಕ್ತಟದಿಂದ ದಿಕ್ಕು ತೋರಲು ದಿಕ್ಪತಿಯೊಬ್ಬನಿಳಿದ,
ನೆನಪಿನ ಗಾಳಿಪಟ ಹತೋಟಿಯಲಿ, ಕವಿ ಜೀವಂತ


ತುಂತುರು ವರುಷ, ರಸಜ್ಙನೆದೆಯಲಿ ಅತೀವ ಹರುಷ,
ಧಾತ್ರಿಯನು ಚುಂಬಿಸಲು ವರುಣನಿಳಿದ ಕೆಳಗೆ,
ಚುಂಬನದ ಪ್ರತಿಬಿಂಬನ ನನ್ನಯ ಭಾವದಲಿ,
ಗಾಳಿಯಲ್ಲಿಯೂ ಸಂಭ್ರಮದ ದನಿ, ಕುಣಿದೆ ನಾನು-ನಲಿದೆ ನಾನು


ಕನನನ ಕಣ್ಣಿಂದಲೂ ಆನಂದದ ಹನಿ, ಕಲ್ಮಷನೂ ಸದೃಕ್ಷನೀಗ,
ಮಳೆಹನಿ ಸರಿಗಮವಾಡಲು, ತಲೆದೂಗಿದೆ ಸೃಷ್ಟಿ ಸಂಪತ್ತು,
ಸ್ವರ್ಗವಾದೀತೆ ಭುವಿ? ಹರುಷದಮಲಿನಲಿ ಹೀಗೆಂದನು ಕವಿ,
ಜಲಕ್ಕನೆ! ಲಯ ತಪ್ಪಿದಂತಾಯಿತು, ಸರಿಗಮ ನಾದವೇಕೋ!


ಪ್ರಚೇತನ ಪ್ರಕೃಷ್ಟ ಪ್ರತಾಪ ಪ್ರತೀಪವಾಗಿ ಪ್ರಕೋಪಗೊಳ್ಳಲು,
ಪ್ರಣಯಿನಿ ಪ್ರಕೃತಿಯ ಪ್ರಾಣದ ಪ್ರಣತೆಗೆ ಪ್ರತಿಘಾತವೀಗ,
ಗಗನನ ಗರ್ಜನೆ ಮರಣ ಮೃದಂಗವಾದರೆ,
ಬಾಯಿಗೆ ಕಟ್ಟಕಡೆಯ ಜಲವಾಯಿತು ಮೇಘದ ಉದ್ಗಾರ


ಸೃಷ್ಟಿಶಕ್ತಿಯ ಹಾಡಿ ಹೊಗಳಿದ ದನಿಯಲಿ ಇನ್ನೆಲ್ಲಿ ಶಕ್ತಿ?
ರಾಯರ ಗೃಹದಲ್ಲೇ ತಲ್ಲಣ, ಇನ್ನಾರು ಕೇಳಿಯಾರು ನನ್ನಯ ಕಾರಣ,
ಪ್ರಜೇಶ್ವರನಲಿ ಸ್ಮರಿಸಲು ಕವಿ, ಪ್ರಜಾಂತಕನಿಳಿದ ಕೆಳಗೆ,
ಕಾಳಿದಾಸನಾಗಲು ಹೊರಟ ನಾನು, ನೆನಪಾದೆ ಇನ್ನು!


ಕವಿಯೆದೆಯಲ್ಲಿನ ಕಡೆ ತರಂಗಗಳು ಹೀಗೆಂದವಂತೆ-
"ಸೃಷ್ಟಿಯ ಆಟ ಬಲ್ಲವರಾರು? ಪರಮಾತ್ಮನ ಇಚ್ಛೆ ತಿಳಿದವರಾರು?
ಕೆಲವು ನಿಮಿಷದ ಮಳೆ ಮಹದಾನಂದ. ಧಾರಾವಾದರೆ ಮೃತ್ಯು!
ವಿಕಾಸದಲಿ ವಿಕಲ್ಪವೇಕೆ? ವಿದು ವಿಚಿತ್ರ ವಿನಾಶಕ ವಿಧಿ!"






ಪದಗಳ ಅರ್ಥ:


. ತೃಷೆ- ಬಾಯಾರಿಕೆ.
. ಆಲಸ್ಯ- ಬೇಸರ.
. ಮನನ- ಆಲೋಚನೆ.
. ಮನಃಕ್ಲೇಶ- ಮನಸ್ಸಿನ ದುಃಖ.
. ದಿಕ್ಕಾಪಟ್ಟೆ- ಸಿಕ್ಕಾಪಟ್ಟೆ.
. ದಿಕ್ತಟ- ದಿಗಂತ.
. ದಿಕ್ಪತಿ- ದಿಕ್ಪಾಲಕ (ವರುಣ).
. ತುಂತುರು- ಸಣ್ಣ ಹನಿ.
. ರಸಜ್ಙ- ರಸಿಕ.
೧೦. ಅತೀವ- ತುಂಬ.
೧೧. ಪ್ರತಿಬಿಂಬ- ಪ್ರತಿಚ್ಛಾಯೆ.
೧೨. ಕನನ- ಒಂದು ಕಣ್ಣುಳ್ಳವ.
೧೩. ಕಲ್ಮಷ- ದುಷ್ಟ.
೧೪. ಸದೃಕ್ಷ- ಯೋಗ್ಯ.
೧೫. ಅಮಲು- ಮದ.
೧೬. ಜಲಕ್ಕನೆ- ದಿಕ್ಕನೆ.
೧೭. ಲಯ- ಸ್ವರಗಳ ಮೇಳ.
೧೮. ಪ್ರಚೇತ- ವರುಣ.
೧೯. ಪ್ರಕೃಷ್ಟ- ಮುಖ್ಯ.
೨೦. ಪ್ರತಾಪ- ಪ್ರಭಾವ.
೨೧. ಪ್ರತೀಪ- ವಿರುದ್ಧ.
೨೨. ಪ್ರಕೋಪ- ಬಹಳ ಕೋಪ.
೨೩. ಪ್ರಣಯಿನಿ- ಪ್ರೇಯಸಿ.
೨೪. ಪ್ರಣತೆ- ದೀಪ.
೨೫. ಪ್ರತಿಘಾತ- ಅಡ್ಡಿ, ತಡೆ.
೨೬. ಗರ್ಜನೆ- ಆರ್ಭಟ.
೨೭. ಉದ್ಗಾರ- ಉಗುಳು.
೨೮. ಪ್ರಜೇಶ್ವರ- ದೇವರು.
೨೯. ಪ್ರಜಾಂತಕ- ಯಮ.
೩೦. ತರಂಗ- ನೀರಿನ ಅಲೆ.
೩೧. ಧಾರಾ- ಪ್ರವಾಹ, ಅತಿಯಾದ ಮಳೆ.
೩೨. ವಿಕಾಸ- ಎವೊಲ್ಯೂಷನ್.
೩೩. ವಿಕಲ್ಪ- ಅನಿಶ್ಚತೆ, ಭೇದ.
೩೪. ವಿನಾಶಕ- ನಾಶ ಮಾಡುವ.

10 comments:

  1. thnx alot :) i hope the language was fine and the meaning reached you.

    ReplyDelete
  2. yeah sure it did.. nd especially d last line's intensity will remain for quiet long..tho i write, read n collect a lot of poems in english...i never thot i wud comprehend one in kannada.. n i must tell u..brilliant work..specially the emotion s vividly sparking!! keep writing..luking forward for yo work!!

    ReplyDelete
  3. this shud really inspire me 2 write more. thnx :)

    ReplyDelete
  4. olle baravaneghe.. thumba prayathna haakiruvudhu saphalavaaghidhe... hecchina enta baravanegheghe yedhurunoduthiddheve...

    ReplyDelete
  5. thnx alot :D
    mattondu baravanige ati sheegradalli..
    btw, nimma hesaru?

    ReplyDelete
  6. hesarinalli yenidhe bidi.. namma comment mukhyavo athava namma hesaro???? btw paarikshe haegayithu..

    ReplyDelete
  7. ಎರಡೂ ಮುಖ್ಯ!!
    ಪರೀಕ್ಷೆ-- ಮುಗಿದು ಹೋದ ಅರ್ಥವಿಲ್ಲದ ಸಂಗತಿಗಳ ಬಗ್ಗೆ ಚಿಂತಿಸಿ-ಚರ್ಚಿಸುವುದು ವ್ಯರ್ಥ!!

    nywyz, it was fine.. thanks for asking..

    ReplyDelete