Monday, November 9, 2009

Shankar Nag: The Visionary




Today is the 55th birth anniversary of 'Namma' Shankar Nag. His contribution to the world of cinema and theatre is immense. Though he left us all at a young age of 35, his achievements speak volumes about his visions. He started off his acting career through the Marathi theatre. Known for his dynamic personality and perfection, he has enchanted one and all through his performances in movies like Geetha, Ondanondu Kaaladalli, Utsav, Minchina Ota, Auto Raaja, Sangliana Series and many more. He has also directed classics like Malgudi Days, Ondu Muttina Kathe, Minchina Ota, Geetha. The movie '22 June,1897' for which Shankar Nag had  written the script, went on to win the national award.
I truly wish and hope that more visionaries like him would take the world of Kannada literature, theatre, filmdom to new heights. Thank You 'Shankranna' for inspiring many talents.


Suggestions:


Watch Geetha and lose yourself to the tunes of Ilayaraaja.
Watch Malgudi Days and you would start loving Indian television all over again.
Minchina Ota and Ondanondu Kaaladalli make a good watch too.
Ondu Muttina Kathe- One of the first Indian movies to be shot underwater and has the legendary Dr.Rajkumar playing the lead. You shouldn't give this a miss.



Sunday, November 1, 2009

ಮೇಘೋದ್ಗಾರ

(Press Ctrl+ for font increase and Ctrl- for font decrease)


ರೀಸೆಂಟ್ಲಿ, ಕರ್ನಾಟಕ ಹಾಗೂ ಪಕ್ಕದ ಆಂಧ್ರದಲ್ಲಿ ವಿಪರೀತ ಮಳೆಯಾಗಿ ಫ಼್ಲಡ್ಸ್ ಕೂಡ ಆಯಿತು. ಕೆಳಗಿನ ಸಾಲುಗಳಲ್ಲಿ ನಾನು ಮಳೆಯ ಬಗ್ಗೆ, ಒಂದು ಹೊಸ ಆಂಗಲ್ನಲ್ಲಿ ಬರೆಯಲು ಯತ್ನಿಸಿದ್ದೇನೆ. ಓದಿ ನೋಡಿ.



               ಮೇಘೋದ್ಗಾರ


ಹಸಿವಿಲ್ಲ ಕವಿಯ ತನುವಿಗೆ, ತೃಷೆಯಿಲ್ಲ-ತೃಪ್ತಿಯಿಲ್ಲ
ಮನದ ಉಪವನದಲಿ ಹೂ ಬಿಡುವ ತನಕ,
ಹೀಗೊಮ್ಮೆ ನಾನು ಮಗದೊಮ್ಮೆ ಕುಳಿತೆ ನೆನಪಿನೊಡನೆ,
ನೆನಪಿನ ಮುಗಿಲಿಂದ ಮಳೆಯಿಲ್ಲ, ಹೂ ಬಿಡದಿನ್ನು


ಆಲಸ್ಯ ಕೂಡಿದೆ ಮನದ ಮನನದಲಿ, ಮನಃಕ್ಲೇಶವಿದು,
ದಿಕ್ಕನೆ ದಿಕ್ಕರಿಯದೆ ದಿಕ್ಕಾಪಟ್ಟೆ ದಿಕ್ಕುಗೆಡಲು ನಾನು,
ದಿಕ್ತಟದಿಂದ ದಿಕ್ಕು ತೋರಲು ದಿಕ್ಪತಿಯೊಬ್ಬನಿಳಿದ,
ನೆನಪಿನ ಗಾಳಿಪಟ ಹತೋಟಿಯಲಿ, ಕವಿ ಜೀವಂತ


ತುಂತುರು ವರುಷ, ರಸಜ್ಙನೆದೆಯಲಿ ಅತೀವ ಹರುಷ,
ಧಾತ್ರಿಯನು ಚುಂಬಿಸಲು ವರುಣನಿಳಿದ ಕೆಳಗೆ,
ಚುಂಬನದ ಪ್ರತಿಬಿಂಬನ ನನ್ನಯ ಭಾವದಲಿ,
ಗಾಳಿಯಲ್ಲಿಯೂ ಸಂಭ್ರಮದ ದನಿ, ಕುಣಿದೆ ನಾನು-ನಲಿದೆ ನಾನು


ಕನನನ ಕಣ್ಣಿಂದಲೂ ಆನಂದದ ಹನಿ, ಕಲ್ಮಷನೂ ಸದೃಕ್ಷನೀಗ,
ಮಳೆಹನಿ ಸರಿಗಮವಾಡಲು, ತಲೆದೂಗಿದೆ ಸೃಷ್ಟಿ ಸಂಪತ್ತು,
ಸ್ವರ್ಗವಾದೀತೆ ಭುವಿ? ಹರುಷದಮಲಿನಲಿ ಹೀಗೆಂದನು ಕವಿ,
ಜಲಕ್ಕನೆ! ಲಯ ತಪ್ಪಿದಂತಾಯಿತು, ಸರಿಗಮ ನಾದವೇಕೋ!


ಪ್ರಚೇತನ ಪ್ರಕೃಷ್ಟ ಪ್ರತಾಪ ಪ್ರತೀಪವಾಗಿ ಪ್ರಕೋಪಗೊಳ್ಳಲು,
ಪ್ರಣಯಿನಿ ಪ್ರಕೃತಿಯ ಪ್ರಾಣದ ಪ್ರಣತೆಗೆ ಪ್ರತಿಘಾತವೀಗ,
ಗಗನನ ಗರ್ಜನೆ ಮರಣ ಮೃದಂಗವಾದರೆ,
ಬಾಯಿಗೆ ಕಟ್ಟಕಡೆಯ ಜಲವಾಯಿತು ಮೇಘದ ಉದ್ಗಾರ


ಸೃಷ್ಟಿಶಕ್ತಿಯ ಹಾಡಿ ಹೊಗಳಿದ ದನಿಯಲಿ ಇನ್ನೆಲ್ಲಿ ಶಕ್ತಿ?
ರಾಯರ ಗೃಹದಲ್ಲೇ ತಲ್ಲಣ, ಇನ್ನಾರು ಕೇಳಿಯಾರು ನನ್ನಯ ಕಾರಣ,
ಪ್ರಜೇಶ್ವರನಲಿ ಸ್ಮರಿಸಲು ಕವಿ, ಪ್ರಜಾಂತಕನಿಳಿದ ಕೆಳಗೆ,
ಕಾಳಿದಾಸನಾಗಲು ಹೊರಟ ನಾನು, ನೆನಪಾದೆ ಇನ್ನು!


ಕವಿಯೆದೆಯಲ್ಲಿನ ಕಡೆ ತರಂಗಗಳು ಹೀಗೆಂದವಂತೆ-
"ಸೃಷ್ಟಿಯ ಆಟ ಬಲ್ಲವರಾರು? ಪರಮಾತ್ಮನ ಇಚ್ಛೆ ತಿಳಿದವರಾರು?
ಕೆಲವು ನಿಮಿಷದ ಮಳೆ ಮಹದಾನಂದ. ಧಾರಾವಾದರೆ ಮೃತ್ಯು!
ವಿಕಾಸದಲಿ ವಿಕಲ್ಪವೇಕೆ? ವಿದು ವಿಚಿತ್ರ ವಿನಾಶಕ ವಿಧಿ!"






ಪದಗಳ ಅರ್ಥ:


. ತೃಷೆ- ಬಾಯಾರಿಕೆ.
. ಆಲಸ್ಯ- ಬೇಸರ.
. ಮನನ- ಆಲೋಚನೆ.
. ಮನಃಕ್ಲೇಶ- ಮನಸ್ಸಿನ ದುಃಖ.
. ದಿಕ್ಕಾಪಟ್ಟೆ- ಸಿಕ್ಕಾಪಟ್ಟೆ.
. ದಿಕ್ತಟ- ದಿಗಂತ.
. ದಿಕ್ಪತಿ- ದಿಕ್ಪಾಲಕ (ವರುಣ).
. ತುಂತುರು- ಸಣ್ಣ ಹನಿ.
. ರಸಜ್ಙ- ರಸಿಕ.
೧೦. ಅತೀವ- ತುಂಬ.
೧೧. ಪ್ರತಿಬಿಂಬ- ಪ್ರತಿಚ್ಛಾಯೆ.
೧೨. ಕನನ- ಒಂದು ಕಣ್ಣುಳ್ಳವ.
೧೩. ಕಲ್ಮಷ- ದುಷ್ಟ.
೧೪. ಸದೃಕ್ಷ- ಯೋಗ್ಯ.
೧೫. ಅಮಲು- ಮದ.
೧೬. ಜಲಕ್ಕನೆ- ದಿಕ್ಕನೆ.
೧೭. ಲಯ- ಸ್ವರಗಳ ಮೇಳ.
೧೮. ಪ್ರಚೇತ- ವರುಣ.
೧೯. ಪ್ರಕೃಷ್ಟ- ಮುಖ್ಯ.
೨೦. ಪ್ರತಾಪ- ಪ್ರಭಾವ.
೨೧. ಪ್ರತೀಪ- ವಿರುದ್ಧ.
೨೨. ಪ್ರಕೋಪ- ಬಹಳ ಕೋಪ.
೨೩. ಪ್ರಣಯಿನಿ- ಪ್ರೇಯಸಿ.
೨೪. ಪ್ರಣತೆ- ದೀಪ.
೨೫. ಪ್ರತಿಘಾತ- ಅಡ್ಡಿ, ತಡೆ.
೨೬. ಗರ್ಜನೆ- ಆರ್ಭಟ.
೨೭. ಉದ್ಗಾರ- ಉಗುಳು.
೨೮. ಪ್ರಜೇಶ್ವರ- ದೇವರು.
೨೯. ಪ್ರಜಾಂತಕ- ಯಮ.
೩೦. ತರಂಗ- ನೀರಿನ ಅಲೆ.
೩೧. ಧಾರಾ- ಪ್ರವಾಹ, ಅತಿಯಾದ ಮಳೆ.
೩೨. ವಿಕಾಸ- ಎವೊಲ್ಯೂಷನ್.
೩೩. ವಿಕಲ್ಪ- ಅನಿಶ್ಚತೆ, ಭೇದ.
೩೪. ವಿನಾಶಕ- ನಾಶ ಮಾಡುವ.

ಇಲ್ಲಿಂದ ಶುರು :)







ನಮಸ್ಕಾರ,
ಮೊಟ್ಟ ಮೊದಲನೆಯದಾಗಿ, ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ಬಿಡುವಿಲ್ಲದ ದಿನಚರಿಯ ನಡುವೆಯೂ ಸಮಯ ಮಾಡಿಕೊಂಡು ನನ್ನ ಬರಹವನ್ನು ಓದಲು ಬಂದಿರುವ ಪ್ರಿಯ ಓದುಗರೇ, ನಿಮಗೆ ನನ್ನ ಹೃತ್ಪೂರ್ವಕ ಕೃತಜ್ಙತೆಗಳು. ಶುರು ಮಾಡುವುದಕ್ಕಿಂತ ಮುನ್ನ ಒಂದೆರಡು ಮುಖ್ಯ ಅಂಶಗಳನ್ನು ಸ್ಪಷ್ಟ ಪಡಿಸಲು ಬಯಸುತ್ತೇನೆ. ಇಲ್ಲಿನ ಬರವಣಿಗೆಗಳು ಕೇವಲ ನನ್ನ ಅಭಿಪ್ರಾಯಗಳನ್ನು ಬಿಂಬಿಸುತ್ತವೇ ಹೊರತು ಇವು ಬೇರೊಂದು ಜನಾಂಗ ಅಥವಾ ಭಾಷೆಯನ್ನು ಹೀಯ್ಯಾಳಿಸುವ ಮಾರ್ಗವಲ್ಲ. ನನ್ನ ಬರಹ ಓದುವುದನ್ನು ಸರಳ ಮಾಡಲೆಂದು, ನನ್ನ ಗದ್ಯಗಳು, ದೈನಂದಿನ ಕನ್ನಡ ಮಾತನಾಡುವ ಶೈಲಿಯಲ್ಲಿ ಇರುತ್ತವೆ. ನನ್ನ ಅಭಿಪ್ರಾಯಗಳಲ್ಲಿ ನವ್ಯವಾದ-ನಿಜವಾದ ವಿಚಾರವಿದ್ದರೆ, ತಿಳಿದುಕೊಳ್ಳಿ-ಅಳವಡಿಸಿಕೊಳ್ಳಿ. ಹಾಗೆಯೇ ಅದನ್ನು ಪರರಲ್ಲೂ ಸಾರಿ. ಸರಿ ಈಗ ವಿಷಯಕ್ಕೆ ಬರೋಣ.

ಪ್ರತಿಯೊಬ್ಬರಿಗೂ ಅವರವರ ಮಾತೃಭಾಷೆ, ತಾಯ್ನಾಡಿನ ಬಗ್ಗೆ ಗೌರವವಿರಬೇಕು. ಗೌರವ ಕೇವಲ ಮಾತಿನ ರೂಪದಲ್ಲಿ ಇದ್ದರೆ ಸಾಲದು, ಕಾರ್ಯರೂಪದಲ್ಲೂ ಹೊರಬರಬೇಕು. ನನ್ನ ಪ್ರಕಾರ ಭಾಷೆಯು ಬಟ್ಟೆ-ಊಟ-ಸೂರಿನಷ್ಟೇ ಫಂಡಮೆಂಟಲ್. ನಮ್ಮ ಸಂಸ್ಕೃತಿ, ಭಾಷೆಯನ್ನು ಗೌರವಿಸಿ, ಸಂರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ.

ಸದಾ, ಮನುಷ್ಯನಿಗೆ ಅವನ ತಟ್ಟೆಯಲ್ಲಿ ಇರುವ ತಿಂಡಿಗಿಂತಲೂ, ಪರರ ಊಟದ ಬಗ್ಗೆಯೇ ಜಾಸ್ತಿ ಯೋಚನೆ ಆಂಡ್ ಆಸೆ. ಮಾನವನಿಗೆ ಚೇಂಜ್ ಇರಲೇಬೇಕು. ಟೆಕ್ನಾಲಜಿಯ ಬೆಳವಣಿಗೆಯಿಂದಾಗಿ, ಪ್ರಪಂಚವು ದಿನೇ-ದಿನೇ ಚಿಕ್ಕದಾದಂತೆ ಭಾಸವಾಗುತ್ತಿದೆ. ಬಹುಶಃ ಇದೇ ಕಾರಣಗಳಿಂದಾಗಿ, ಈಗಿನ ಜೆನರೇಷನ್ನಿಗೆ ಪಾಶ್ಚಿಮಾತ್ಯದ ಸಂಸ್ಕೃತಿ, ವಿಷಯ, ತರ್ಕ, ಆಚರಣೆಗಳು ಹೆಚ್ಚು ಅಟ್ಟ್ರಾಕ್ಟಿವ್ ಆಗಿ ಕಾಣಿಸುತ್ತವೆ.

ಪರರನ್ನು ಹೊಗಳುವುದು ಒಳ್ಳೆಯ ಸ್ವಭಾವ. ಅಂತವರ ಒಳ್ಳೆಯ ಪಾಯಿಂಟ್ಸ್ಗಳನ್ನು ಅಳವಡಿಸಿಕೊಳ್ಳುವುದರಲ್ಲಿ ನಾನು ಯಾವ ತಪ್ಪನ್ನೂ ಕಾಣೆನು. ಆದರೆ, ನಮ್ಮ ಆತ್ಮಾವಲೊಕನದ(ಸೆಲ್ಫ಼್-ಅಸ್ಸೆಸ್ಮೆಂಟ್) ಹೊರತು, ಅಭ್ಯಾಸವು ಘೊರವಾದ ತಪ್ಪಾಗುತ್ತದೆ. ಹಾಗೆಯೇ, ಇದೇ ಅನಾಲಜಿ ಭಾಷೆ-ಸಂಸ್ಕೃತಿಗೂ ಹೊಂದುತ್ತದೆ.      

ಜೀವನದಲ್ಲಿ ಕಲಿಯಲು ಅನೇಕ ವಿಷಯಗಳುಂಟು. ಪ್ರಪಂಚದ ಅಸಂಖ್ಯಾತ ಪ್ರಸಂಗಗಳು ನಮ್ಮ ಯೋಚನೆಗಳನ್ನು ಟ್ರಿಗ್ಗರ್ ಮಾಡುತ್ತವೆ. ಜಗತ್ತಿನಾದ್ಯಂತ ಮಹಾನ್ ಸಾಧನೆಗಳನ್ನು ಮಾಡಿರುವ ವ್ಯಕ್ತಿಗಳು ನಮ್ಮ ಇನ್ಸ್ಪಿರೇಷನ್ ಆಗುತ್ತಾರೆ. ಇವೆಲ್ಲವೂ ಸ್ವಾಭಾವಿಕ. ಎಕ್ಸ್ಪೋಷರ್ ನಮಗೆ ವರ್ಚುಅಲ್ ರೆಕ್ಕೆಗಳನ್ನೇ ತಂದುಬಿಡುತ್ತದೆ. ನಾವು, ಅನೇಕ ಬಾರಿ ಮುಂದಾಲೋಚಿಸದೇ ಹಾರಿ ಬಿಡುತ್ತೇವೆ. ನಮ್ಮಯ ಗೂಡು ಶ್ಮಶಾನವಾದಂತೆ ಭಾಸವಾಗುತ್ತದೆ!

ಮಾನವ-ವೃಕ್ಷ (ಪರ್ಸನಾಲಿಟಿ) ಬೆಳೆಯಬೆಕು, ಅದೇನೋ ನಿಜ. ಮರ ಬೆಳೆದು ಹೆಮ್ಮರವಾಗಬೇಕು(ಬೆಳವಣಿಗೆ). ಹೆಮ್ಮರದ ನೆರಳು ಪರರಿಗೆ ಹಿತವಾಗಬೇಕು(ಇನ್ಸ್ಪೈರ್). ನಮ್ಮಯ ನೆಲದ ಸಾರವನ್ನು (ಸಂಸ್ಕೃತಿ) ಹೀರಿ ಇನ್ನೂ ಅಗಲವಾಗಿ, ಎತ್ತರವಾಗಿ ಬೆಳೆಯಬೇಕು. ನಮ್ಮಯ ಎತ್ತರದಿಂದ ಬೆಚ್ಚರಗೊಂಡು ಅಚ್ಚರಿಯಿಂದ ಪಕ್ಕದ ಹಳ್ಳಿಯವರೂ (ಜಗತ್ತಿನಾದ್ಯಂತ) ಮಾತನಾಡಬೇಕು-ಹೊಗಳಬೇಕು. ಆದರೆ ನಮ್ಮಯ ಬೇರು (ಫ಼ೌಂಡೇಷನ್) ಸದಾನಮ್ಮನೆಲದಲ್ಲೇ!

ಹಾಗಾದರೆ, ಸಂಸ್ಕೃತಿ ಅಂದರೇನು? ಅದನ್ನು ಯಾರು ಶುರು ಮಾಡಿದರು? ನಾವು ಅದರ ಬಗ್ಗೆ ಯಾಕೆ ತಲೆ ಕೆಡಿಸಿಕೊಳ್ಳಬೇಕು? ಅದು ಅಷ್ಟು ಮುಖ್ಯವೇ? ವಿಷಯ ಅಪ್ರಸ್ತುತವೇ?

ನನ್ನ ಪ್ರಕಾರ, ಸಂಸ್ಕೃತಿಯೆಂದರೆ (ಸರಳವಾಗಿ ಹೇಳಬೇಕಾದಲ್ಲಿ)- ಭಾಷೆ, ಆಚರಣೆ, ಸಾಹಿತ್ಯ, ಕಲೆ (ಸಂಗೀತ, ನೃತ್ಯ-ಇತ್ಯಾದಿ), ನಾಡಿನ ಇತಿಹಾಸ, ನಮ್ಮ ಪಾಲಕರು ನೀಡುವ ವಿವೇಕ(ಮಾರಲ್ಸ್). ಸಂಸ್ಕೃತಿ ಯಾರ ಸ್ವತ್ತೂ ಅಲ್ಲ. ಒಬ್ಬ ವ್ಯಕ್ತಿಯಿಂದಾಗಿ ಕಂಪ್ಲೀಟ್ ಆಗುವಂತದ್ದೂ ಅಲ್ಲ. ಸಂಸ್ಕೃತಿಯು ವಿಕಾಸದಲ್ಲಿ ಅನೇಕ ಬದಲಾವಣೆಗಳನ್ನು ಕಾಣುತ್ತದೆ. ಆದರೆ ಬದಲಾವಣೆಗಳು ಅದರ ಮೂಲರೂಪವನ್ನೇ ಬದಲಿಸುವಷ್ಟು ಪ್ರಬಲವಾಗಿರಬಾರದು.

ದಯವಿಟ್ಟು ಗಮನಿಸಿ, ನಾನು ಇಲ್ಲಿ ನಮ್ಮ ನಾಡಿನ ಸಂಸ್ಕೃತಿಯ ಬಗ್ಗೆ ಮಾತನಾಡುತ್ತಿದ್ದೇನೆ ಹೊರತು ಜಾತಿ-ರಿಲಿಜನ್ ಬಗ್ಗೆ ಅಲ್ಲ. ನಾನು ಗಮನಿಸಿದಂತೆ, ಈಗಿನ ಜೆನರೇಷನ್ ನಮ್ಮ ದೇಶದ ಮತಗಳ ಮೂಢನಂಬಿಕೆಗಳಿಂದ ಬೇಸತ್ತಿ, ಅಧಿಕಾರ ಹೊಂದಿದವರ ದಬ್ಬಾಳಿಕೆಯಿಂದ ಸುಸ್ತಾಗಿ ಚೇಂಜ್ ಒಂದನ್ನು ಬಯಸುತ್ತಾರೆ(ಇದಕ್ಕೆ ಇನ್ನೂ ರೀಸನ್ಸ್ ಗಳಿವೆ-ಸದ್ಯಕ್ಕೆ ಅವುಗಳ ಚರ್ಚೆ ಬೇಡ). ನಮ್ಮಯ ವರ್ತನೆ  ರಾಂಗ್ ಎಂದು ನಾನು ಹೇಳಲಾರೆ. ಆದರೆ ನಮ್ಮ ಸಂಸ್ಕೃತಿಯನ್ನು ತ್ಯಜಿಸಲು ಅಥವಾ ನಿರ್ಲಕ್ಷಿಸಲು ಇದೇ ಮುಖ್ಯ ಕಾರಣವೆಂದೆನಿಸುತ್ತದೆ.


ಇಂತಹ ಅಭಿಪ್ರಾಯಗಳಿಂದಾಗಿಯೇ ನಾನು ಬ್ಲಾಗ್ ಅನ್ನು ಸ್ಟಾರ್ಟ್ ಮಾಡುತ್ತಿದ್ದೇನೆ. ಕನ್ನಡದ ಬಗ್ಗೆಯ ಗೌರವ-ಕಾಳಜಿ ಇದಕ್ಕೆ ಕಾರಣಗಳೇ. ಇನ್ ಕೇಸ್ ಈಗಿನ ಅತಿಯಾದ ಕಾಂಪಿಟಿಷನ್ ಇಲ್ಲದಿದ್ದಲ್ಲಿ ನಾನು ಬಹುಶಃ ಕುರ್ತ ಧರಿಸಿ, ಚೀಲವಿಟ್ಟುಕೊಂಡು ಕನ್ನಡದ ಸಾಹಿತ್ಯವನ್ನೇ ಜೀವನದ ಮಾರ್ಗವನ್ನಾಗಿ ಆಯ್ದುಕೊಳ್ಳುತ್ತಿದ್ದೆ! ನಮ್ಮ ದೇಶವು ಅನೇಕ ಭಾಷೆ-ಸಂಸ್ಕೃತಿಗಳ ಮಿಲನ. ಆದರೆ ನಾನು ಬೈ ಬರ್ಥ್ ಕನ್ನಡಿಗನಾದ್ದರಿಂದ, ಇದರ ವಿಷಯ-ಸಂಸ್ಕೃತಿಗಳನ್ನು ಫಾಲೋ ಮಾಡುವುದು ನನ್ನ ಕರ್ತವ್ಯವಾಗುತ್ತದೆ. ಕಳೆದ ಐದು ವರ್ಷದಲ್ಲಿ, ನಾನು ಆರು ವಿದ್ಯಾಸಂಸ್ಠೆಗಳಲ್ಲಿ ಶಿಕ್ಷಣ ಪಡೆಯಬೇಕಾಗಿ ಬಂತು. ನನ್ನ ಗಮನಕ್ಕೆ ಬಂದಂತೆ ಅನೇಕರಿಗೆ ಅವರ ಭಾಷೆಯ ಮೇಲೆ ಗೌರವ-ಕಾಳಜಿಯಿದ್ದಂತೆ ಕಾಣಲಿಲ್ಲ. ಆಂಗ್ಲ ವ್ಯಾಮೋಹ ಹೆಚ್ಚಾಗುತ್ತಿದೆ, ಏನು ಮಾಡೋದು?

ನಿಮ್ಮಲ್ಲಿ ಎಷ್ಟು ಜನ ಕನ್ನಡ ಪತ್ರಿಕೆ ಓದುತ್ತೀರಾ? ಕನ್ನಡ ಸಾಹಿತ್ಯದಲ್ಲಿ ಏನು ಇಂಟ್ರೆಸ್ಟಿಂಗ್ ಎನಿಸಿದೆ? ಕನ್ನಡ ಚಿತ್ರೋದ್ಯಮದ ಭವಿಷ್ಯವೇನು? ಕರುನಾಡಿನ ಅಮೇಜ಼ಿಂಗ್ ಜಾಗಗಳನ್ನು ಒಮ್ಮೆಯಾದರೂ ನೋಡಿದ್ದೀರಾ? ಕನ್ನಡ ನಾಡನ್ನು ಆಳಿದ ದೊರೆಗಳ ಹೆಸರು ಗೊತ್ತೇ? ಪಬ್ಲಿಕ್ ಜಾಗಗಳಲ್ಲಿ ಕನ್ನಡದಲ್ಲಿ ಮಾತನಾಡಲು ಮುಜುಗರವೇ? - ಹೀಗೆ ಇಂತಹ ಅನೇಕ ಪ್ರಶ್ನೆಗಳುಂಟು.

ಕನ್ನಡ ಭಾಷೆಗೆ ಅತ್ಯಂತ ಹೆಚ್ಚು ಜ್ಙಾನಪೀಠ ಪ್ರಶಸ್ತಿ ಸಂದಿದೆ. ಕನ್ನಡ ಭಾಷೆಗೆ ಮೂರು ಸಾವಿರ ವರ್ಷಕ್ಕಿಂತ ಹೆಚ್ಚು ಇತಿಹಾಸವಿದೆ. ಕುವೆಂಪು ಅವರು ಹೇಳಿದಂತೆ- "ಕನ್ನಡದ ರನ್ನನು ಕಾವ್ಯ ರಚಿಸುವಾಗ, ಇಂಗ್ಲೀಷ್ ದೊರೆಗಳ ಆಂಸೆಸ್ಟರ್ಸ್ ಇನ್ನೂ ಕಾಡು ಮನುಷ್ಯನಂತೆ ದಿಕ್ಕಿಲ್ಲದೆ ಅಲೆಯುತ್ತಿದ್ದರು." ನಮ್ಮ ನಾಡಿನಲ್ಲಿ ವೈಭಿನ್ಯವುಂಟು. ಉತ್ತರ ಕನ್ನಡ, ಮಂಗಳೂರು, ಕೊಡಗು, ಮಂಡ್ಯ, ಬೆಂಗಳೂರು - ಹೀಗೆ ಅನೇಕ ಪ್ರದೇಶಗಳು ನಿಜಕ್ಕೂ ಯುನೀಕ್.

ನಾನು ಓದುಗರಲ್ಲಿ ಕೇಳುವುದಿಷ್ಟೇ- ಕನ್ನಡದ ಇತಿಹಾಸ ಅಪಾರವಾದದ್ದು, ಅದನ್ನು ಹೆಚ್ಚಾಗಿ ಬೆಳೆಸಿ-ಬಳಸಿ. ಸಾಹಿತ್ಯ ಓದಿ,ಸಂಗೀತ ಕೇಳಿ, ಚಿತ್ರಗಳನ್ನು ವೀಕ್ಷಿಸಿ. ಹಾಗೆಯೇ ಇದನ್ನು ತಿಳಿಯದ ಅನೇಕರನ್ನು ಭೋದಿಸಿ. ನಿಜ, ನಮ್ಮಯ ಚಿತ್ರಗಳ ಕ್ವಾಲಿಟಿ ಆಂಗ್ಲಕ್ಕಿಂತ ಕಡಿಮೆ ಇರಬಹುದು. ಆದರೆ, ಇಂತಹ ಕೆಲವು ಅಪೂರ್ಣತೆಗಳನ್ನು ಪೂರ್ಣಗೊಳಿಸುವುದು ನಮ್ಮೆಲ್ಲರ ರೆಸ್ಪಾನ್ಸಿಬಿಲಿಟಿ. ಅಲ್ಲವೇ?

ಇನ್ನು, ಅನೇಕ ಕರುನಾಡ ವಾಸಿಗಳಿಗೆ ಕನ್ನಡ ಓದುವುದಕ್ಕಾಗಲಿ-ಬರೆಯುವುದಕ್ಕಾಗಲಿ ಬರುವುದಿಲ್ಲ. ಕೆಲವರಿಗೆ ಮದವು ಮುದವೆನಿಸಿ ಹೀಗೆ ಮಾಡುತ್ತಾರೆನ್ನುವುದು ಡಿಸಪ್ಪಾಯಿಂಟಿಂಗ್. ಪರರಾಜ್ಯ, ಪರದೇಶದಿಂದ ಬಂದಿರುವ ಜನತೆಗೆ ಬೇಸಿಕ್ ಕನ್ನಡ, ಕನ್ನಡದ ಆಲ್ಫಬೆಟ್ಸ್, ಕನ್ನಡ ಓದುವುದನ್ನು ಹೇಳಿಕೊಡಿ. ಕುವೆಂಪು, ಗುಂಡಪ್ಪ, ಬೀಚಿ, ಬೇಂದ್ರೆ, ತೇಜಸ್ವಿ, ಕಾರಂತರು, ಇಂದಿರ, ಶಿವರುದ್ರಪ್ಪ, ದಾಸರು, ತ್ರಿವೇಣಿ - ಇಂತಹ ಅನೇಕರ ಸಾಹಿತ್ಯವನ್ನು ಓದಿ. ಕರುನಾಡನ್ನು ಒಮ್ಮೆ ಫುಲ್-ರೌಂಡ್ ಹೊಡೆದು ಬನ್ನಿ. ಶಾಸ್ತ್ರೀಯ ಮತ್ತು ಹಿಂದುಸ್ತಾನಿ ಸಂಗೀತಕ್ಕೆ ಕನ್ನಡಿಗರು ಮಾಡಿರುವ ಅಪಾರ ಕೊಡುಗೆಯನ್ನು ತಿಳಿದುಕೊಳ್ಳಿ. ಇದೇ ನೀವು ಸಿಂಪಲ್ ಆಗಿ ಕನ್ನಡಕ್ಕೆ ನೀಡಬಹುದಾದ ಕಾಣಿಕೆ.

ಓಕೆ, ಇನ್ಮೇಲೆ ಬ್ಲಾಗ್ ಅಲ್ಲಿ ನನ್ನಯ ಇನ್ನೂ ಹಲವಾರು ಅಭಿಪ್ರಾಯಗಳನ್ನು ಬರೆಯಲು ಇಚ್ಛಿಸುತ್ತೇನೆ. ನನ್ನ ಭಾಷೆಗೆ ನನ್ನಯ ಕೊಡುಗೆ ಈಗಿನಿಂದಲೇ ಶುರುವಾಗಲಿ. ನನ್ನ ಕವನ-ಪದ್ಯಗಳನ್ನು ಇಲ್ಲಿ ಪ್ರಸ್ತುತ ಪಡಿಸುತ್ತೇನೆ. ನನ್ನ ಮೊದಲ ಗೀಚುಗೆ - ’ಮೇಘೋದ್ಗಾರ’. ನಿಮ್ಮ ಫ಼ೀಡ್ಬಾಕ್ ಕೊಡಲು ಮರೆಯಬೇಡಿ. ತಿಳಿಯದ ಪದಗಳನ್ನು, ಕನ್ನಡದ ಡಿಕ್ಷನರಿಯಲ್ಲಿ ಓದಿ ತಿಳಿದುಕೊಳ್ಳಿ. ’ಜ್ಙಾನಂ ಪರಮಂ ಧ್ಯೇಯಂ’.

ಕುವೆಂಪು ಅವರು ಹೇಳಿದ್ದಾರೆ-
ಮಾತಿಗೊಂದು ಅರ್ಥ ಬೇಕೆ?
ಅರ್ಥವಿದ್ದರೆ ಅಷ್ಟೆ ಸಾಕೆ?
ಮಾತು ಅರ್ಥ ಎಲ್ಲ ವ್ಯರ್ಥ,
ಸ್ವ-ಅರ್ಥವಿರದಿರೆ.’
ಅಂದರೆ- ’ಮಾತಿನಲ್ಲಿ ನಮ್ಮ ಮನವಿರಲಿ. ಕೇವಲಜಸ್ಟ್ ಫ಼ರ್ ದಿ ಸೇಕ್ ಆಫ಼್ ಇಟ್ಮಾತನಾಡುವುದು ಬೇಡ. ಪ್ರತಿ ಪದದಲ್ಲೂ ಸಿನ್ಸಿಯಾರಿಟಿ ಇರಲಿ.’

ಸದ್ಯಕ್ಕೆ ಇಷ್ಟೇ. ನಿಮ್ಮಟೈಂಗೆ ತುಂಬಾ ಥಾಂಕ್ಸ್. ’ಎಲ್ಲೇ ಇರು, ಹೇಗೇ ಇರು, ಎಂದೆಂದಿಗೂ ನೀ ಕನ್ನಡವಾಗಿರು’. ಜೈ ಹಿಂದ್, ಜೈ ಕರ್ನಾಟಕ ಮಾತೆ.
ಕನ್ನಡದೊಳ್ ಎಣ್ಣೆಯಿಂದ, ಕನ್ನಡಿಗರೊಳ್ ಕಿಚ್ಚಿಂದ, ಕರುನಾಡ ಹಣತೆಯ ಹಚ್ಚಿ.’